ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಶೀನಪ್ಪ ಭಂಡಾರಿ ನಿಧನಕ್ಕೆ ಸಂತಾಪ

ಲೇಖಕರು : ಉದಯವಾಣಿ
ಗುರುವಾರ, ಜೂನ್ 27 , 2013
ತೆಂಕುತಿಟ್ಟಿನ ಪ್ರಸಿದ್ಧ ಕಲಾವಿದ, ಹಲವು ಮೇಳಗಳ ಸಂಘಟಕ ಮತ್ತು ಪ್ರಯೋಗಶೀಲ ಪ್ರವೃತ್ತಿಯ ಪುತ್ತೂರು ಶೀನಪ್ಪ ಭಂಡಾರಿ ಅವರ ನಿಧನಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ದಯಾನಂದ ಪೈ ಮತ್ತು ಪಿ.ಸತೀಶ್‌ ಪೈ ಯಕ್ಷಗಾನ ಅಧ್ಯಯನ ಕೇಂದ್ರವು ತನ್ನ ಗಾಢ ಸಂತಾಪವನ್ನು ವ್ಯಕ್ತಪಡಿಸಿದೆ.

ನಿರಂತರ ಎಪ್ಪತೈದು ವರ್ಷಗಳ ತಿರುಗಾಟ ಮಾಡಿದ್ದ ಪುತ್ತೂರು ಶೀನಪ್ಪ ಭಂಡಾರಿಯವರ ಬದುಕಿನ ಏಳುಬೀಳುಗಳನ್ನು ದಾಖಲಿಸಿ ಯಕ್ಷಭಂಡಾರಿ ಎಂಬ ಹೆಸರಿನಲ್ಲಿ ಕೃತಿಯನ್ನು ಯಕ್ಷಗಾನ ಅಧ್ಯಯನ ಕೇಂದ್ರವು ಪ್ರಕಟಿಸಿದೆ. ಅವರು ನೆನಪುಗಳನ್ನು ಆಧರಿಸಿದ ಸಾಹಸ ಮತ್ತು ಹೋರಾಟದ ಚಿತ್ರಣಗಳಿರುವ ಯಕ್ಷಭಂಡಾರಿ ಗ್ರಂಥವನ್ನು ಚಂದ್ರಶೇಖರ ಮಂಡೆಕೋಲು ಅವರು ನಿರೂಪಿಸಿದ್ದರು. ಕೃತಿ ಬಿಡುಗಡೆ ಸಮಾರಂಭವು ಸುಳ್ಯದ ಮಂಡೆಕೋಲು ಎಂಬಲ್ಲಿ ಜರಗಿದ್ದು, ಆ ಸಂದರ್ಭದಲ್ಲಿ ಸಾಕಷ್ಟು ವಯಸ್ಸಾಗಿದ್ದರೂ ಅತ್ಯಂತ ಲವಲವಿಕೆಯಿಂದ ಸಮಾರಂಭದಲ್ಲಿ ಭಾಗವಹಿಸಿ ಕೇಂದ್ರದ ಸನ್ಮಾನವನ್ನು ಸ್ವೀಕರಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ಕಾರ್ಯ ಯೋಜನೆಗಳನ್ನು ಭಂಡಾರಿಯವರು ಮೆಚ್ಚಿಕೊಂಡಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.

ಕಲಾವಿದ ಹಾಗೂ ಸಂಘಟಕನ ಮಾಗಿದ ಅನುಭವಗಳನ್ನು ಅವರು ಹೊಂದಿದ್ದರು. ಕಲಾವಿದ ಮತ್ತು ಸಂಘಟಕನಾಗಿ ಪ್ರಯೋಗಗಳನ್ನು ನಡೆಸುತ್ತಾ ಬಂದ ಉತ್ಸಾಹದ ಚಿಲುಮೆಯಾಗಿದ್ದರು. ಯಕ್ಷಗಾನ ಕಲೆ ಮತ್ತು ಕಲಾವಿದನ ಸೋಲು ಮತ್ತು ಅವಮಾನಗಳ ಸ್ಥಿತ್ಯಂತರಗಳನ್ನು ಯಕ್ಷಗಾನದ ಸೃಜನಶೀಲದ ಬೆಳವಣಿಗಾಗಿ ಬಳಸಿಕೊಂಡಿದ್ದರು. ಯಕ್ಷಗಾನದ ಹಿಮ್ಮೇಳ ಮತ್ತು ಮುಮ್ಮೇಳಗಳ ನೂರಾರು ಕಲಾವಿದರ ಸಂಬಂಧಗಳನ್ನು ಇರಿಸಿಕೊಂಡಿದ್ದ ಶೀನಪ್ಪ ಭಂಡಾರಿಯವರು ಎಲ್ಲಾ ಅರ್ಥಗಳಲ್ಲಿಯೂ ಯಕ್ಷಗಾನದ ಭಂಡಾರವಾಗಿದ್ದರು. ಯಕ್ಷಗಾನವನ್ನು ಅವರು ಸ್ವೀಕರಿಸಿದ ಮತ್ತು ಮುನ್ನಡೆಸಿದ ಉಪನ್ಯಾಸಗಳು, ಮೇಳದ ಆಟಗಳ ಕುಣಿತದ ಶೈಲಿ, ಯಕ್ಷಗಾನ ಪ್ರಯೋಗಗಳ ಕುರಿತ ಅವರ ಅನುಭವಗಳು ಮತ್ತು ಸಮರ್ಥನೆಗಳು, ಕಲಾಜಗತ್ತಿನ ಒಳಸುಳಿ ಮತ್ತು ಒತ್ತಡಗಳನ್ನು ಅವರು ನಿಭಾುಸುತ್ತಿದ್ದ ಕ್ರಮ- ಮೊದಲಾದ ಸಂಗತಿಗಳು ಯಕ್ಷಗಾನ ಪರಂಪರೆಗೆ ಮತ್ತು ಇತಿಹಾಸವನ್ನು ಪರಿಭಾ'ಸುವ ಸಂದರ್ಭದಲ್ಲಿ ಒದಗಿ ಬರುವ ಆಕರ ಸಾಮಾಗ್ರಿಗಳಾಗಿವೆ.

ಸುದೀರ್ಘ‌ ಕಾಲಾವಧಿಯಲ್ಲಿ ಹೊಟ್ಟೆ ಪಾಡಿಗಾಗಿ, ಆಸರೆಗಾಗಿ ಆಶೋತ್ತರಗಳ ಈ ಕೋರಿಕೆಗಾಗಿ ಮತ್ತು ಬದುಕಿನ ಸುಖ ಸಂತೋಷಕ್ಕಾಗಿ ಯಕ್ಷಗಾನವನ್ನು ಅವಲಂಭಿಸಿದ ಶೀನಪ್ಪ ಭಂಡಾರಿಯವರ ನಿಧನ ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅವರು ನಡೆದ ಹಾದಿ ಯಕ್ಷಗಾನದ ರಾಜಮಾರ್ಗಗಳಲ್ಲೊಂದು. ಅವರ ನಿಧನಕ್ಕೆ ಮಂಗಳೂರು ವಿ.ವಿ.ಯ ವರಿಷ್ಠರಾದ ಕುಲಪತಿ. ಪ್ರೋ.ಟಿ.ಸಿ.ಶಿವಶಂಕರಮೂರ್ತಿ ಮತ್ತು ಯಕ್ಷಗಾನ ಅಧ್ಯಯನ ಕೇಂದ್ರದ ಸಲಹಾ ಸಮಿತಿ, ನಿರ್ದೇಶಕ ಡಾ.ಕೆ.ಚಿನ್ನಪ್ಪ ಗೌಡ ಮತ್ತು ಸಿಬ್ಬಂದಿಗಳು ಗಾಢ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ ಎಂದು ಯಕ್ಷಗಾನ ಅಧ್ಯಯನ ಕೇಂದ್ರದ ಪ್ರಕಟ® ತಿಳಿಸಿದೆ.

ಕೃಪೆ : http://www.udayavani.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ